ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ | ಪ |
ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗಕಾಣಮ್ಮ | ಅಪ |
ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ
ಜಲಮಣಿಯ ಕೊರಳಲ್ಲಿ ತುಳಸುಮಾಲೆಗಳು ಪೇಳಮ್ಮ
ಸುಲಲಿತ ಕಮಂಡಲು ದಂಡವನೇ ಧರಿಸಿಹನೆ ನೋಡಮ್ಮ
ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ | ೧ |
ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ
ವಂದಿಸಿ ಸ್ತುತಿಸುವ ಭೂಸುರವೃಂದ ನೋಡಮ್ಮ
ಚಂದದಲಂಕ್ರತಿಯಿಂದ ಶೋಭಿಸುವಾಂದ ನೋಡಮ್ಮ
ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಂಗಳರಸಘದಿಂದ ರಹಿತನೆ |೨ |
ಅಭಿನವ ಜನಾರ್ಧನ ವಿಠಲನ ಧ್ಯಾನಿಸುವ ನೋಡಮ್ಮ
ಅಭಿನಂದಿಸಿದವರಿಗೆ ಅಖಿಲಾರ್ಧವ ಸಲ್ಲಿಸುವ ನೋಡಮ್ಮ
ನಭಮಣಿಯಂದದಿ ವಿವಿಧದಿ ಶೋಭಿಸುವ ನೋಡಮ್ಮ
ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜ ಭವಾoಡದಿ ಪ್ರಬಲಕಾಣಮ್ಮ |೩ |
Monday, July 5, 2010
Subscribe to:
Posts (Atom)